Friday, July 16, 2010

ಅರ್ಥವಿಲ್ಲದ ಸ್ನೇಹ..

ಅದೊಂದು beautiful ಸಂಜೆ... ನಾನು ನನ್ನ ಗೆಳತಿಯು hostel ಕಿಟಕಿ ಬಳಿ ಕುಳಿತು ಏನೋ romantic song ಗುನುಗ್ತಾ ಒಬ್ರನ್ನೊಬ್ರು tease ಮಾಡ್ತಾ ನಗ್ತಾ ಇದ್ವಿ...ಗೆಳತಿ ಅದಾರಿಗೋ mobile ಲಿ sms ಮಾಡ್ತಾ ಇರೋದನ್ನ ನೋಡಿದ್ದೆ ನಾನು..ಅವಳ ಅಣ್ಣ ಎಂದು ತಿಳಿದಾಗ ಸುಮ್ಮನಾದೆ...ಆಮೇಲೆ ಅವಳಿಗೆ ಕಾಲ್ ಬಂತು...ಏನೇನೋ ಹರಟ್ತಾ ಇದ್ದ ಅವಳನ್ನ ಬಿಟ್ಟು ನಾನು ನನ್ನದೇ ಲೋಕದಲ್ಲಿ ಮುಳುಗಿ ಹೋದೆ...

ಮನಸ್ಸು ಯಾರದ್ದೋ ಸ್ನೇಹಾನ ಬಯಸ್ತ ಇತ್ತು..ಆದ್ರೆ ಆ ಸ್ನೇಹ ಎಲ್ಲಿಂದ ಯಾವಾಗ ಯಾರಿಂದ ಬರತ್ತೋ ಅಂತ ಗೊತ್ತಾಗದೆ ಏಕಾಂಗಿಯಾಗಿದ್ದೆ...ಒಮ್ಮೊಮ್ಮೆ ಅದನ್ನ ಗೆಳತಿ ಹತ್ರ ಹೇಳ್ಕೊಂಡದ್ದು ಇದೆ..ಅದಕ್ಕವಳು "ಸಿಕ್ತಾರೆ ಬಿಡೂ...." ಅಂತ ಮಾತ್ರ ಹೇಳ್ತಿದ್ಲು..

ನನ್ನದೇ ಕನಸಿನ ಲೋಕದಲ್ಲಿ ನಾನಿದ್ದಾಗ ಕೇಳಿತು ಗೆಳತಿಯ ನಗು. ಅವಳನ್ನು ನೋಡಿದಾಗ ಯಾಕೋ ನನ್ನನ್ನೇ ಏನೋ ಹೇಳ್ಕೊಂಡು tease ಮಾಡ್ತಿದ್ದಂಗೆ ಅನ್ಸ್ತು... ಭಾರಿ ಕಿಲಾಡಿ ಅವ್ಳು... ತಮಾಷೆ ಅಂತ ಏನೇನೋ ಮಾಡ್ತಾಳೆ...ಅವ್ಳೇನೆ ಮಾಡಿದ್ರು ನಂಗಿಷ್ಟ ಅವಳನ್ನ...ಯಾಕಂದ್ರೆ ಅವ್ಳು ನನ್ನ ಪ್ರಾಣ ಸ್ನೇಹಿತೆ...ಯಾರಲ್ಲೂ ಹೇಳ್ಕೊಳ್ಳದ secrets ನ share ಮಾಡಿದ್ರೆ ಸ್ಪಂದಿಸೋ ಮುದ್ದು ಹೃದಯ...let it be...ಅವಳೇನಕ್ಕೆ ನಗ್ತಾ ಇದಾಳೆ ಅನ್ನೋ curiosity ಬಂತು ನಂಗೆ...ಆದ್ರು ಕೇಳಿಲ್ಲ...ಅವ್ಳಾಗೇ ಹೇಳ್ಬಹುದಂತ ಸುಮ್ಮನಿದ್ದೆ...

call cut ಮಾಡಿ ಬಂದ ಅವ್ಳು "ನನ್ನಣ್ಣನಿಗೆ ನಿನ್ number ಕೊಡ್ಲಾ?" ಅಂತ ಕೇಳಿದಾಗ ಒಂದು ಕ್ಷಣ ಏನ್ ಹೇಳ್ತಿದಾಳೋ ಅಂತ ಅರ್ಥ ಆಗಿಲ್ಲ.. "ಯಾಕೆ?" ಅಂತ ಕೇಳ್ದೆ... "ಬೇಕಂತೆ...;-)" ಅಂತ ಮಾತ್ರ ಹೇಳಿ ಹೋದಳು...ಮತ್ತೆ ಆ ವಿಷಯ ಅಲ್ಲಿಗೆ ನಿಂತಿತ್ತು...
ಅದರೂ ಕೆಲವೊಮ್ಮೆ ಅವಳು ಮಾತಾಡೋವಾಗ ಮನಸ್ಸು ಆ ಕಡೆ ತಂತಾನೇ ಸೆಳೀತಿತ್ತು..
ಅಂತು saturday ಬಂತು... ಮನೆಗೆ ಹೋಗೋ ದಿನ... ಕುಶ್ ಕುಶೀಲಿ ಅವಳಿಗೆ bye ಹೇಳಿ ಮನೆ ಕಡೆ ಹೋಗೋ bus ಹತ್ತಿದೆ..ಹಾಗೆ ಕಿಟಕಿಯಿಂದ ಹೊರಗಡೆ ನೋಡ್ತಿದ್ದಾಗ mobile ring ಆಯಿತು...ನೋಡ್ತೀನಿ...ಅವಳೇ...
ಏನಪ್ಪಾ ಅಂತ recieve ಮಾಡಿದ್ರೆ..."ನೀ ನನ್ನ friendಆಗಿದ್ರೆ sms ಮಾಡು ನನ್ನಣ್ಣನಿಗೆ " ಅಂದ್ಬಿಡೋದಾ...??? ಆಮೇಲೆ ನಿನ್ನ number ಕೂಡ ಸಿಕ್ತು...ಏನ್ ಮಾಡಬೇಕು ತೋಚಲಿಲ್ಲ... ತುಂಬಾ think ಮಾಡಿ ಅಂತು ಇಂತೂ ಧೈರ್ಯ ಮಾಡಿ sms ಮಾಡಿಯೇ ಬಿಟ್ಟೆ...ಅಲ್ಲಿಂದ ಶುರು ಆಯಿತು ನನ್ನ ನಿನ್ನ ಸ್ನೇಹ...
ಮೊದಮೊದಲು ಬರೀ sms ನಲ್ಲಿಯೇ ಶುರು ಆದ ಮಾತುಗಳು ಮತ್ತೆ miss call ಆಯಿತು ..ಹಾಗೆಯೆ call ಆಯಿತು...5 min ಮೀಸಲಾದ ಮಾತುಗಳು ಅರ್ಧ ಗಂಟೆ ಆಯಿತು... ಗಂಟೆಗಟ್ಟಲೆ ಆಯಿತು... ಏನೋ ಒಂದು ಅನುಭೂತಿ...ಏನೋ ಒಂದು ನೆಮ್ಮದಿ...ನನ್ನವರೆ ಅದ ಯಾರೋ ನಂಜೊತೆ ಇದಾರೆ ಅನ್ನಿಸತೊಡಗಿತು... ನಿನ್ನ ಜೊತೆ ಮಾತಾಡದಿದ್ರೆ ಮನಸ್ಸಲ್ಲೇನೋ disturbence ಶುರು ಆಯಿತು...ನಿನ್ನ ನೋಡದೇನೆ.. ನಿನ್ನ ಮಾತು ಕೇಳೀನೆ ತುಂಬಾ ಹಚ್ಕೊಂಡೆ ನಿನ್ನ...ಮೊದಲು ಮನೆಗೆ ಹೋಗೋಕೇ ಕಾಯ್ತಾ ಇದ್ದವಳು ಆಮೇಲೆ ಮನೆಗೆ ಹೋದ್ರೆ ನಿನ್ ಜೊತೆ ಹೇಗ್ ಮಾತಾಡೋದಂತ ಒದ್ದಾಡ್ತಿದ್ದೆ...
ಹೀಗಿರೋವಾಗ ಒಂದು ದಿನ ಗೆಳತಿ ಮನೆಗೆ ಹೋಗಿದ್ದಾಗ ನೀನೂ ಊರಿಗೆ ಬಂದಿದ್ದೆ... ಆ ದಿನ ನಮ್ಮಿಬರ ಭೇಟಿ ಆಯಿತು ನೆನಪಿದ್ಯಾ ಗೆಳೆಯಾ...? ನಿಮ್ಮ ತಂಗಿದು ಒಂದೇ ಹಠ...ನಾನ್ ನಿಮ್ ಪಕ್ಕ ಕೂತು ಫೋಟೋ ತೆಗೀಬೇಕಂತ... ಒಂದು ಕ್ಷಣ ಸಿಟ್ಟು ಬಂದ್ರು ಯಾಕೋ ಮನಸ್ಸೊಳಗೆ ಇಬ್ರು ಕುಶಿ ಪಟ್ಕೊಂಡಿದ್ದು ನೆನಪಿದೆಯ ನಿಮಗೆ?
ಅಂದು ಸಂಜೆ ನಿಮ್ಮ ಮನೆಯಿಂದ ಅವಳ ಮನೆಗೆ ನೀವೇ ನಿಮ್ car ನಲ್ಲಿ ನಮ್ಮನ್ನ ಡ್ರಾಪ್ madidri... ಅವಳಿಗೆನೋ ಗಿಫ್ಟ್ ಮಾಡಿ ನಂತರ "ಇದು ನಿನ್ನ friend ಗೆ" ಅಂತ ಕೊಟ್ಟ dall ನೆನಪಿದ್ಯಾ ಗೆಳೆಯ?? ಅದನ್ನ ಹಾಗೇ ಜೋಪಾನ ಮಾಡಿದ್ದೆ ನಾನು..
ಇದೆಲ್ಲ ನಂಗೆ ಮರೆಯಲಾರದ sweet memories...
ಆದ್ರೆ ಗೆಳೆಯ...ಇತ್ತೀಚಿಗೆ ನೀವ್ಯಾಕೆ ನನ್ನ avoid ಮಾಡ್ತಾ ಇದ್ದೀರಾ ಅಂತ ನಂಗೆ ಗೊತ್ತಾಗ್ತಿಲ್ಲ... ಅಂದು ಮನೆಗೆ ಹೋಗಿ ಅಮ್ಮನ ಮಾತು ಕೇಳಿ ನಾನ್ ಮನಸ್ಸು ಕೆಟ್ಟು ನಿಮ್ ಜೊತೆ ಏನೋ ಹೇಳಿದ್ದೆ...ಅದಕ್ಕೆ ಇಷ್ಟೆಲ್ಲಾ ದೂರಾನ? ನಿಮಗೆ ಇವೆಲ್ಲ ಚಿಕ್ ಚಿಕ್ಕ ವಿಷ್ಯಾನೆ ಆಗಿರ್ಬೋದು...ಆದ್ರೆ ನಂಗೆ... ಹಾಗಲ್ಲ...
ನೀವು ನನ್ನ ಮರತಷ್ಟು easy ಆಗಿ ನಿಮ್ಮನ್ನ ನಂಗೆ ಮರೆಯೋದಿಕ್ಕೆ ಅಗ್ತಾ ಇಲ್ಲ...ಆ ಎಲ್ಲ memories ನನ್ನ ಕಿತ್ತು ತಿಂತಾ ಇದೆ... ಆ dall ನನ್ನ ಬಳಿ ಇದ್ರೆ ಎಲ್ಲಿ ದಿನಾ ಅದನ್ನ ನೋಡಿ ಅಳ್ತೀನೋ ಅಂತ college ಬಿಡೋ ಕ್ಷಣದಲ್ಲಿ ಅದನ್ನ ನಿಮ್ ತಂಗಿ ಕೈಲಿ ಜೋಪಾನ ಮಾಡು ಅಂತ ಕೊಟ್ಟಿದೀನಿ..ನಿಮಗೋಸ್ಕರ ಅದೆಶ್ಟು ಅತ್ತಿದಿನೋ ನಂಗೆ ಗೊತ್ತಿಲ್ಲ... ನನ್ನ ಗೆಳತಿನು ಏನು ಹೇಳ್ತಾ ಇಲ್ಲ... ನೀವು ಅವಳ ಜೋತೆನು ಮೊದಲಿನಂತೆ ಇಲ್ಲ ಅಂತ ಗೊತ್ತಾಯ್ತು...ಯಾಕೆ ಗೆಳೆಯ? ಇಷ್ಟೇನಾ ನಮ್ಮ ಗೆಳೆತನ??
ಇಲ್ಲಿವರೆಗಿದ್ದ ನಮ್ಮ ಸ್ನೇಹಕ್ಕೆ ಅರ್ಥಾನೆ ಇಲ್ವಾ?

Thursday, July 15, 2010

Hosa Thiruvu

ಆ ದಿನ ನೀವು "today.. whole day you have got workshop" ಅಂತ ಹೇಳಿದಾಗ ಕೈಗಳು ತನಗೆ ತಾನೆ ನಡ್ಗೋಕೆ ಶುರು ಆಯಿತು. 2 hours workshop ಲ್ಲಿ ನಿಂತರೆ 2 days ತನಕ ಮಲ್ಕೊಂಡಲ್ಲಿಂದ ಏಳಕ್ಕಾಗದ ಹಾಗಗ್ತಿದ್ದ ನಂಗೆ 1 day ful work shop ಅಂದಾಗ ಜೀವ ಕೈಗೆ ಬಂದಂಗಾಯ್ತು. ಅಳುನೆ ಬಂದಂಗಾಯ್ತು. ಸೀದಾ ನಿಮ್ ಹತ್ರ ಬಂದು "sir i can't do" ಅನ್ನೋವಾಗ ಕಣ್ಣಿಂದ ನೀರಿಳೀತಾ ಇದ್ದಿದ್ದು ನೆನಪಿದ್ಯ ನಿಮಗೆ? ಆ ದಿನ ರಾತ್ರಿ ನಿಮಗೆ call ಮಾಡಿ ನನ್ನ ಕಷ್ಟಾನೆಲ್ಲ ಹೇಳ್ತಾ ಅತ್ತಿದ್ದು ಇನ್ನು ಹಾಗೇ ಕಣ್ಮುಂದೆ ಕಟ್ಟಿದಂಗೆ ಕಾಣ್ತಾ ಇದೆ ನಂಗೆ.

ಆಮೇಲಿನ ದಿನಗಳಲ್ಲಿ ಅದೆಷ್ಟು sms ಮಾಡ್ತಾ ಇದ್ವಿ. ಎಲ್ಲದ್ರೊಂದಿಗೆ ಬಂತು workshop externals. life ಲ್ಲಿ ಅದ್ವರೆಗೆ ಆಗದ ಭಯ ನನ್ನ ಮನಸಲ್ಲಿ.. ಯಾಕಂದ್ರೆ ನಾ ಏನ್ ಮಾಡ್ತಿನೋ ನಂಗೆ ಗೊತ್ತಿರ್ಲಿಲ್ಲ. hall enter ಆಗ್ತಿದ್ದಂಗೆ ನಿಮ್ಮನ್ನ ನೋಡಿದಾಗ ಅದೇನೋ ಕುಶಿ ಮನಸಲ್ಲಿ. ನಿಮ್ಗೆ ನನ್ ಬಗ್ಗೆ ಎಲ್ಲಾನು ಗೊತ್ತಿದ್ದಿದ್ರಿಂದ ಏನಾದ್ರು ಮಾಡ್ತಿರ ಅನ್ನೋ confidence. ನನ್ ಮನ್ಸಲ್ಲಿದ್ದಿದ್ದು ನಿಜ ಆಯಿತು ನೋಡಿ. ನಾನು ಆರಾಮಾಗಿ ಹೊರಗಡೆ ಬಂದಿದ್ದೆ. ಆ ಕುಶೀಲಿ ನನ್ hall ticket ಕೂಡ hall ನಲ್ಲೆ ಮರೆತು ಬಂದಿದ್ದೆ.

ಅದಾಗ್ಗೆ ಶುರು ಆಗಿದ್ದ ತುಂತುರು ಮಳೆ ಹನಿಯಲ್ಲಿ ಹೆಜ್ಜೆ ಹಾಕ್ತ ನನ್ನದೇ ಕನಸುಗಳನ್ನ ಕಾಣ್ತಾ ಹೋಗ್ತಿದ್ದ ನಂಗೆ ಹಿಂದಿಂದ ನೀವು ಎರಡು ಬಾರಿ ಕರೆದಾಗ್ಲು ಗೊತ್ತಾಗಿರಲಿಲ್ಲ. ಮತ್ತೆಲ್ಲೋ ನನ್ನ ಯಾರೋ ಕೂಗಿದಂತಾಗಿ ತಿರುಗಿ ನೋಡೋವಾಗ ನೀವು ಕೈಯಲ್ಲೊಂದು ಡೈರಿ ಹಿಡ್ದು ನಗ್ತಾ ನಿಂತಿದ್ರಿ. "hall ticket ಬೇಡ್ವ?" ಅಂತ ನೀವ್ ಕೇಳಿದ ಮೇಲೆಯೇ ಅದರ ನೆನಪಾಗಿದ್ದು. ಆ ಡೈರಿ ನ ನೀವು ನಂಗೆ ಕೊಟ್ಟು ಇದ್ರಲ್ಲಿ ಮನಸ್ಸಿಗೆ ತೋಚಿದ್ದನ್ನ ಬರಿ ಅಂತ ಹೇಳ್ದಾಗ ಮೊದಲು ಏನಂತ ಅರ್ಥ ಆಗಿರಲಿಲ್ಲ. ಆ ಡೈರಿ ಲಿ ನೀವೇನ್ ಬರ್ದಿರ್ತೀರ ಅಂತ ನೋಡೋ ಕುತೂಹಲ ಇತ್ತು. ಹಾಗೇ ಅದ್ನ ತಗೊಂಡು ನಮ್ಮನೆಗೆ return ಆಗೋವಾಗ ತಡೀಲಾರದೆ ಓಪನ್ ಮಾಡಿದೆ. ಅದ್ರಲ್ಲಿರೋ ನಿಮ್ ಸ್ನೇಹ ನೋಡಿ ಮನಸ್ಸು ಕುಣೀತಿತ್ತು ನನ್ನೊಳಗೆ.

i think ಅಲ್ಲಿಂದ ನನ್ life ಹೊಸ ತಿರುವು ಪಡಕೊಂತು ..

ಮನೆ reach ಆಗಿ ಬಿಸಿ ಬಿಸಿ ಕಾಫೀ ಕುಡೀತ ನಿಮ್ ಡೈರಿ ಪುಟಗಳಲ್ಲಿ ನನ್ನ ಮನಸ್ಸಿನ ಭಾವನೆಗಳನ್ನ ಬರೆಯೋಕೆ ಶುರು ಮಾಡಿದೆ..ಅಮೇಲಿನ ದಿನಗಳಲ್ಲಿ ನಮ್ಮ ಮನಸ್ಸಲ್ಲಿ ಹೇಳ್ಕೊಳ್ಳೋಕಾಗ್ದ ಮಾತುಗಳನ್ನೆಲ್ಲ ಡೈರಿ ಲಿ ಬರಿತ ಇದ್ವಿ..ಅದೇನೋ ಕುಶಿ ಇತ್ತು ಅದನ್ನ ಬರ್ಯೋಕು...ಬರ್ದಿದ್ದನ್ನ ಓದೋಕು...ನಿಮ್ ಮನಸ್ಸು ನನಗರ್ಥ ಆಗ್ತಿತ್ತು...ಹಾಗೆ ನಂದು ನಿಮಗೆ ...ಏನೋ ಒಂಥರಾ close ಆಗ್ಬಿಟ್ವಿ ಆ ಸ್ವಲ್ಪ ಸಮಯದಲ್ಲೇ ..

ಅದೊಂದು ದಿನ ನಾವೇನೋ ಮಾತಾಡ್ತಿರಬೇಕಾದ್ರೆ sudden ಆಗಿ ನ ಕೇಳಿದ್ದ ಒಂದು simple ಕುಎಸ್ತಿಒನ ನಮ್ಮಿಬರ ಮಾತನ್ನ ಅಲ್ಲೇ ಅರ್ಧಕ್ಕೆ ನಿಲ್ಸಿತ್ತು ನೆನಪಿದ್ಯ??.... "ನಾವಿಬ್ರು ಯಾಕಿಷ್ಟು ಮಾತಾಡ್ತೀವಿ sir? ನಮ್ ಮಧ್ಯೆ ಇರೋ relation ಏನು? ನಾ ನಿಮಗೆ ಏನಾಗಬೇಕು?" ಅಂತ ನಾ ಕೇಳ್ದಾಗ ಅದೊಂದು ಕ್ಷಣ ಉತ್ತರ ಇಲ್ಲದೆ ಇಬ್ರು ಮನಸ್ಸೊಳಗೆ ಸಂಕಟ ಪಟ್ಟಿದ್ದು ನೆನಪಿದ್ಯ ನಿಮಗೆ?
ಆಮೇಲೆ ನೀವ್ ಕೊಟ್ಟ ಉತ್ತರ life ಲಿ ಯಾರಗೂ ಸಿಗದೇ ಇರೋ ಒಂದು beautiful gift ನಂಗೆ ಸಿಗೋ ಥರ ಮಾಡಿದೆ...
ಅದೇನ್ ಗೊತ್ತ? ನನ್ನ ಅಣ್ಣ...
ಹ್ಮ್ಮ್ಮ್..... ಅಂದು ನೀವು "ನನ್ನ ಪ್ರೀತಿಯ ತಂಗಿ ಆಗಿ ಜೀವನದ ಕೊನೆ ತನಕ ನನ್ನ ಜೊತೆಗೆ ಇರ್ತಿಯ??" ಅಂತ ಕೇಳೋವಾಗ...ನನ್ನ ಮನಸ್ಸೇ ನನ್ನ ಜೊತೆ ಮಾತಾಡ್ತಿದೆಯೋ ಏನೋ ಅನ್ನಿಸಿ ಬಿಟ್ಟಿತ್ತು... ಅಲ್ಲಿ ಬಂದು ನಿಮ್ಮನ್ನ ಮುದ್ದು ಮಾಡ್ಬಿಡೋಣ ಅನಿಸ್ತಿತ್ತು.."ನಿಮ್ಮಂಥ ಅಣ್ಣ ನಂಗೆ ಸಿಕ್ಕಿದ್ದಿದ್ರೆ "...ಅಂತ ನಿಮ್ಮನ್ನ ನೋಡಿ ಮಾತಾಡ್ಸಿದ ಕ್ಷಣದಿಂದ ನನ್ಮನಸ್ಸಲ್ಲಿತ್ತು ...ಆದ್ರೆ ಏನ್ ಮಾಡೋದು...ನೀವು ನನ್ನ lecturer ಆಗಿದ್ರಿ...ಮನಸ್ಸಲ್ಲಿದ್ದಿದ್ದನ್ನೆಲ್ಲ ಹೇಳಿದ್ರೆ ಎಲ್ಲಿ ತಪ್ಪು ತಿಳ್ಕೊಳ್ತಿರೋ ಅಂತ ಸುಮ್ಮನಿದ್ದೆ...ಆದ್ರೆ ನೀವೂ ನನ್ನಿಂದ ಅದನ್ನೇ ಬಯಸ್ತ ಇದ್ರಿ ಅಂತ ಗೊತ್ತಾದಾಗ ಹುಚ್ಚು ಕಟ್ಟಿ ಕುಣಿಬೇಕು ಅನ್ನಿಸ್ತಿತ್ತು.
i think, i was the luckiest person in the whole world at that moment...

ಅಲ್ಲಿಂದ ನನ್ನ life style change ಆಯಿತು...ನಾನು ನಿಮ್ಮ ಸ್ವಂತ ತಂಗಿಗಿಂತ ಜಾಸ್ತಿ ಆದೆ ನಿಮಗೆ...ಯಾವ ಅಣ್ಣನಲ್ಲಿಯು ಇಲ್ಲದ ಸ್ನೇಹ ನಿಮ್ಮಲ್ಲಿ ನಾ ಕಂಡ್ಕೊಂಡೆ...ನನ್ನ lucky bro ಆಗ್ಬಿಟ್ರಿ ನೀವು...ಯಾರೇನೆ ಹೇಳಿದ್ರು...ಯಾರ್ ನನ್ನಿಂದ ದೂರ ಹೋದರು...ನೀವ್ ಮಾತ್ರ ನನ್ ಜೊತೇನೆ ಇದ್ರಿ...ಒಂದು ಕ್ಷಣ ನನ್ನ ಬಿಡದೆ...ಹೇಗೆ ಚಿಕ್ ಮಗು ತಪ್ಪು ಹೆಜ್ಜೆ ಹಾಕೋವಾಗ ತಿದ್ದಿ ನಡೆಸ್ತಾರೋ ಹಾಗೇ ನನ್ನ ಇಂಚಿಂಚು care ತಗೊಳ್ತ ನನ್ನ ಜೋತೆಗಿರ್ತಾ ಇದ್ರಿ...ನಿಮ್ಮ life ನ್ನು ಮರೆತು ನನ್ನ life ಬಗ್ಗೆ ಮಾತ್ರ think ಮಾಡ್ತಾ ಇದ್ರಿ...ನಿಜಕ್ಕೂ...am so lucky ಅಣ್ಣ...ಕಳೆದ ಜನ್ಮದಲ್ಲಿ ನಾ ನಿಜಕ್ಕೂ ಪುಣ್ಯ ಮಾಡಿದ್ದೆ ಅನ್ಸತ್ತೆ.........

ಕೊನೆವರೆಗೂ ನಮ್ ಸಂಭಂಧ ಇದೆ ಥರ ಇರಬೇಕಂತ ನಂಗಾಸೆ ಅಣ್ಣ... ಇರತ್ತೆ ಅಲ್ಲಾ ??

ಎಂದಿಗೂ ನಿಮ್ಮ ಪ್ರೀತಿ ಮಾತ್ರ ಬಯಸುವ
ಮುದ್ದು